
13th May 2025
ಮಲ್ಲಮ್ಮ ನುಡಿ ವಾರ್ತೆ
ಕುಕನೂರು : ತಾಲೂಕಿನ ಬನ್ನಿಕೊಪ್ಪ ರೈಲು ನಿಲ್ದಾಣಕ್ಕೆ ಹಂಪಿ ವೇಗದೋತ ರೈಲು ನಿಲ್ಗಡೆ ನೋಡುವಂತೆ ರೈಲ್ವೆ ಮಂತ್ರಿಗಳಾದ ವಿ ಸೋಮಣ್ಣ ಅವರಿಗೆ ಒತ್ತಾಯಿಸಲಾಗುವುದು ಎಂದು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆಯ ಸಂಸ್ಥಾಪಕ ರಾಷ್ಟ್ರ ಅಧ್ಯಕ್ಷ ಎಂ ಎನ್ ಕುಕನೂರು ಹೇಳಿದರು.
ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ವರದಿಗಾರರೊಂದಿಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಎಂ ಎನ್ ಕುಕನೂರು ಮಾತನಾಡುತ್ತಾ ರೈಲ್ವೆ ಇಲಾಖೆಯಿಂದ ಮೇ 15 ರಂದು ಗದಗ ವಾಡಿ ರೈಲು ಮಾರ್ಗದ ಪ್ರಥಮ ಹಂತದ ತಳಕಲ್ ಕುಷ್ಟಗಿ ಮಾರ್ಗ ಲೋಕಾರ್ಪಣೆಗೊಳಿಸುತ್ತಿರುವುದು ಸಂತಸದ ವಿಷಯವಾಗಿದ್ದು ಇದರ ಜೊತೆ ಕುಷ್ಟಗಿ, ಯಲಬುರ್ಗಾ ಹಾಗೂ ಕುಕುನೂರು ತಾಲೂಕುಗಳ ಜನತೆಯು ಕೆಲಸ ಕಾರ್ಯದ ನಿಮಿತ್ಯ ಬೆಂಗಳೂರಿಗೆ ತೆರಳಲು ಅನುಕೂಲವಾಗಲು ಹಂಪಿ ಎಕ್ಸ್ಪ್ರೆಸ್ ರೈಲು ಗಾಡಿಯನ್ನು ಕುಕನೂರು ತಾಲೂಕಿನ ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ನೂತನ ಮಾರ್ಗ ಲೋಕಾರ್ಪಣೆಗೆ ಆಗಮಿಸುವ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಅವರಿಗೆ ಒತ್ತಾಯಿಸುತ್ತಾ ಮನವಿ ಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದರು.
ಕೋವಿಡ್ ಪೂರ್ವದಲ್ಲಿ ಹಂಪಿ ಎಕ್ಸ್ಪ್ರೆಸ್ ರೈಲು ಗಾಡಿ ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿದ್ದು ಈ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಿದ್ದು ಇಲ್ಲಿಯ ಜನ ಈ ರೈಲು ಗಾಡಿಯ ಪ್ರಯೋಜನವನ್ನು ಸಹ ಪಡೆದಿರುತ್ತಾರೆ.ಆದರೆ ಕೋವಿಡ್ ಲಾಕ್ಡೌನ್ ಸಮಯದಲ್ಲಿ ರೈಲು ಸಂಚಾರವನ್ನು ನಿಲ್ಲಿಸಿ ಪುನರ್ ಪ್ರಾರಂಭಗೊಳಿಸಿದಾಗ ಈ ರೈಲುಗಾಡಿಯನ್ನು ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಪಡಿಸಿದ್ದು ಇಲ್ಲಿನ ಜನತೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ರೈಲ್ವೆ ಇಲಾಖೆ ಕುಷ್ಟಗಿ ಪಟ್ಟಣವರೆಗೆ ರೈಲು ಸಂಚಾರ ಆರಂಭಿಸುತ್ತಿರುವುದು ಅತ್ಯಂತ ಸಂತಸ ಹಾಗೂ ಈ ಭಾಗದ ಜನತೆಯ ಬಹು ದಿನಗಳ ಕನಸು ನನಸಾಗುವ ಸಂಭ್ರಮದೊಂದಿಗೆ ಹಂಪಿ ಎಕ್ಸ್ಪ್ರೆಸ್ ರೈಲು ಗಾಡಿಯನ್ನು ಕುಷ್ಟಗಿ ರೈಲ್ವೆ ಗಾಡಿ ಜೊತೆ ಲಿಂಕ್ ಮಾಡಿ ಬೆಂಗಳೂರಿಗೆ ಹೋಗಲು ಅನುಕೂಲ ಮಾಡಿಕೊಟ್ಟಲ್ಲಿ ಈ ಭಾಗದ ರೈತರ ಕೃಷಿ ಚಟುವಟಿಕೆಗೆ ಸೇರಿದಂತೆ ವ್ಯಾಪಾರ ವಾಣಿಜ್ಯ ದೃಷ್ಟಿಯಿಂದ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಚಂದ್ರಕಾಂತ್ ಪಾಟೀಲ್ ರಾಜ್ಯ ಉಪಾಧ್ಯಕ್ಷರು, ಯಶೋದಾ ಸಿ ರಾಜ್ಯ ಉಪಾಧ್ಯಕ್ಷರು ಮಹಿಳಾ ಘಟಕ, ಮಂಜುಳಾ ರಾಮೇಗೌಡ ಮೈಸೂರು ಜಿಲ್ಲಾ ಉಪಾಧ್ಯಕ್ಷರು, ಪಿಟ್ಟನಗೌಡ ಮಾಲಿ ಪಾಟೀಲ್ ಕೊಪ್ಪಳ ಜಿಲ್ಲಾ ಕಾರ್ಯಧ್ಯಕ್ಷರು, ಬಸವರಾಜ ಅಡವಿ, ಮೆಹಬೂಬ್ ಮಾಳೆಕೊಪ್ಪ, ಹನುಮೇಶ್, ಹೊನ್ನಪ್ಪ, ವೆಂಕಟೇಶ್ ಇಳಿಗೆರ್, ಬರ್ಮಣ್ಣ, ಅಂಬರೀಶ್, ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ. ರಿ. ದೆಹಲಿ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ